ಚೈತ್ರಾ ಎಚ್‌ಜಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಮತ್ತು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹಿನ್ನೆಲೆ ಗಾಯಕಿ. ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಿಗೆ ಹಾಡಿದ್ದಾರೆ. ಚೈತ್ರಾ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಜಿನಿಯರ್ ಆಗಿದ್ದಾರೆ. ಹಾಗೂ ಕ್ರೀಡೆ, ಜಿಮ್ನಾಸ್ಟಿಕ್ಸ್ ಮತ್ತು ಫೆನ್ಸಿಂಗ್‍ಗಳಲ್ಲಿ ರಾಷ್ಟ್ರ ಮಟ್ಟದ ಪದಕ ವಿಜೇತರಾಗಿದ್ದಾರೆ. == ಅವಲೋಕನ == ೧೯೯೩ ರಲ್ಲಿ ತನ್ನ ಎಂಟನೇ ವಯಸ್ಸಿನಲ್ಲಿ ಚೈತ್ರಾ ಅವರು ವಿ. ಮನೋಹರ್ ಅವರ ಸಂಗೀತ ನಿರ್ದೇಶನದಲ್ಲಿ ಬೇಡ ಕೃಷ್ಣ ರಂಗಿನಾಟ ಎಂಬ ಚಲನಚಿತ್ರಕ್ಕೆ ಹಾಡುವ ಮೂಲಕ ಹಿನ್ನೆಲೆ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಹಿನ್ನೆಲೆ ಗಾಯಕಿಯಾಗಿ ಚೈತ್ರ ಅವರ ವೃತ್ತಿಜೀವನ ಹೀಗೆ ಆರಂಭವಾಯಿತು. ಅವರು ೨೦೦೩ ರಲ್ಲಿ ಭಗವಾನ್ ಚಿತ್ರಕ್ಕಾಗಿ ಹಿನ್ನೆಲೆ ಗಾಯನಕ್ಕೆ ಮರಳಿದರು ಮತ್ತು ಅಂದಿನಿಂದ ಅವರ ಅಸಾಂಪ್ರದಾಯಿಕ ಧ್ವನಿ ಮತ್ತು ಅವರ ಗಾಯನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕನ್ನಡ ಭಾಷೆಯ ಅಮೃತಧಾರೆ ಚಿತ್ರದ ಅವರ "ಹುಡುಗ ಹುಡುಗ" ಹಾಡು ೨೦೦೫ ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. == ಧ್ವನಿಮುದ್ರಿಕೆ == == ಪುರಸ್ಕಾರಗಳು == ೨೦೦೫–೦೬: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ : ಅಮೃತಧಾರೆ ಚಲನಚಿತ್ರದ "ಹುಡುಗ ಹುಡುಗ" ಹಾಡು. ೨೦೦೭: ರೋಟರಿ ಬೆಂಗಳೂರು ಮಿಡ್‌ಟೌನ್ ಮತ್ತು ಬ್ರಿಗೇಡ್ ಗ್ರೂಪ್‌ನಿಂದ ಯುವ ಸಾಧಕಿ ವಿಶೇಷ ಉಲ್ಲೇಖ ಪ್ರಶಸ್ತಿ ೨೦೧೨: ಉದಯ ಟಿವಿ ಕುಟುಂಬ ಪ್ರಶಸ್ತಿ ಅತ್ಯುತ್ತಮ ಗಾಯಕಿ: "ಜೋಕಾಲಿ" == ಉಲ್ಲೇಖಗಳು ==